ಇಂದಿನ ಕಾರ್ಯಕ್ರಮ(09/01/2025)
ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ರಾತ್ರಿ ನಗರ ಭಜನಾ ಸಂಕೀರ್ತನೆಪುತ್ತೂರು ಪುತ್ತೂರು ಬದ್ರಿಯಾ ಜುಮಾ ಮಸೀದಿ ವಠಾರದ ಸಭಾಂಗಣದಲ್ಲಿ ರಾತ್ರಿ ೯ಕ್ಕೆ ಕರವಡ್ತ ವಲಿಯುಲ್ಲಾಹಿ ತಂಙಳ್‌ರವರ ಪುತ್ತೂರು ಉರೂಸ್ ಸಮಾರಂಭದ ಉದ್ಘಾಟನೆತೆಂಕಿಲ ಬೈಪಾಸ್ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಸಂಜೆ ೬ರಿಂದ ಪುತ್ತೂರು ಇನ್ನರ್ ವೀಲ್ ಕ್ಲಬ್‌ಗೆ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವರ ಅಧಿಕೃತ ಭೇಟಿದರ್ಬೆ ಕೃಷ್ಣ ಆರ್ಕೇಡ್ ಡಾ. ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆ ೯.೩೦ರಿಂದ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, ಉಚಿತ […]
ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆ: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಭಾನವಿ ಕೃಷ್ಣ.ಪಿ
ಪುತ್ತೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ,ಮೈಸೂರು ಇವರು ನಡೆಸಿದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಭಾನವಿ ಕೃಷ್ಣ.ಪಿ 85% ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈಕೆ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ಹಾಗೂ ವಿದ್ವಾನ್ ಗಿರೀಶ್ ಕುಮಾರ್ ಇವರ ಶಿಷ್ಯೆಯಾಗಿದ್ದು ಪ್ರಸ್ತುತ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ […]
ಹುಲಿಮನೆ ಸುಕುಮಾರ ಗೌಡ ನಿಧನ
ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ನಿವಾಸಿ, ಅರಂತೋಡು ಇರ್ನೆ ಹುಲಿಮನೆಯ ಸುಕುಮಾರ ಗೌಡರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಹಿಂದೆ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಇವರು ನಿವೃತ್ತಿ ಬಳಿಕ ಅರಂತೋಡಲ್ಲಿ ನೆಲೆಸಿದ್ದರು. ಇತ್ತೀಚೆಗೆ ಚೆನ್ನಕೇಶವ ದೇವಸ್ಥಾನದ ಸಮೀಪದಲ್ಲಿ ವಾಲಸರಿ ಮಜಲಿಗೆ ಹೋಗುವಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದರು.ಮೃತರು ಪತ್ನಿ ವಸಂತಿ, ಪುತ್ರಿಯರಾದ ಶಶಿಕಲಾ ಹಾಗೂ ಶೋಭಾರನ್ನು ಅಗಲಿದ್ದಾರೆ.
ಕಲ್ಮಡ್ಕ:ಕು.ಪ್ರಣತಿ ಜೋಗಿಬೆಟ್ಟು ಭರತನಾಟ್ಯದಲ್ಲಿ ಡಿಸ್ಟಿಂಕ್ಷನ್
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆ ಯಲ್ಲಿ ಕು. ಪ್ರಣತಿ ಜೋಗಿಬೆಟ್ಟು (90%) ಡಿಸ್ಟಿಂಕ್ಷನ್ ಪಡೆದು ತೇರ್ಗಡೆ ಹೊಂದಿದ್ದಾಳೆ.ಇವಳು ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಜೆ ಹಾಗೂ ಶ್ರೀಮತಿ ಸಂಧ್ಯಾ ಜೆ ದಂಪತಿಗಳ ಪುತ್ರಿ. ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ. ಪುತ್ತೂರಿನ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ನಕರ್ನಾಟಕ ಕಲಾಶ್ರೀ […]
ಹತ್ಯಡ್ಕ ಪ್ರಾಥಮಿಕ ಸಂಘದ ಚುನಾವಣೆ: ಫಲಿತಾಂಶ ಘೋಷಣೆಗೆ ತಡೆ – ಸಹಕಾರ ಭಾರತಿಯ11 ಸೌಹಾರ್ದ ಸಹಕಾರಿ ಒಕ್ಕೂಟದ ಓರ್ವ ಅಭ್ಯರ್ಥಿ ಮುನ್ನಡೆ
ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಸಂಘದ ಚುನಾವಣೆ ಜ. 8 ರಂದು ನಡೆದಿದ್ದು ಮತ ಎಣಿಕೆ ಕಾರ್ಯ ಮುಗಿದಿದೆ. ನ್ಯಾಯಾಲಯದ ತೀರ್ಪು ಬಾರದ ಕಾರಣ ಫಲಿತಾಂಶ ಘೋಷಣೆ ತಡೆ ಹಿಡಿಯಲಾಗಿದೆ. ಮತ ಎಣಿಕೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು 12 ರಲ್ಲಿ 11 ಸ್ಥಾನಗಳಲ್ಲಿ ಜಯ ಸಾಧಿಸಿದ್ದು,ಸೌಹಾರ್ದ ಸಹಕಾರಿ ಒಕ್ಕೂಟದ ಓರ್ವ ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದಾರೆ. ಸಹಕಾರ ಭಾರತಿಯ ಅಭ್ಯರ್ಥಿಗಳಲ್ಲಿ ಸಾಮಾನ್ಯ ಕ್ಷೇತ್ರದಿಂದ ರಾಘವೇಂದ್ರ ನಾಯಕ್, ರಾಜು ಕೆ. ಸಾಲ್ಯಾನ್, ವರದಶಂಕರ್ ದಾಮ್ಲೆ, ರತೀಶ್ ಬಿ., ಕೊರಗಪ್ಪ ಗೌಡ […]
ದ. ಕ. ಜಿಲ್ಲಾ ಕಾಂಗ್ರೇಸ್ ಕಮಿಟಿಯ ಅಧ್ಯಕ್ಷ ಹರೀಶ್ ಕುಮಾರ್ ಬಗ್ಗೆ ನಿಂದನಾತ್ಮಕ ಹೇಳಿಕೆಯನ್ನು ಸಾಮಾಜಿಕ ಜಾಲಾತಾಣದಲ್ಲಿ ಬಿತ್ತರಿಸಿದವರ ವಿರುದ್ಧ ಠಾಣೆಗೆ ದೂರು
ಬೆಳ್ತಂಗಡಿ: ದ. ಕ. ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್ ವಿರುದ್ದ ಜ. 7 ರಂದು “ಮಹಾ ಎಕ್ಸ್‌ಪ್ರೆಸ್ “ವೆಬ್ ನ್ಯೂಸ್ ನಲ್ಲಿ ಹಾಲಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ರಾಜಕೀಯ ನಿವೃತಿ ಘೋಷಿಸಿದ್ದಾರೆಂದು ಸುಳ್ಳು ಸುದ್ದಿಯನ್ನು ಬಿತ್ತರಿಸಿ ಕೆ. ಹರೀಶ್ ಕುಮಾರ್ ಅಭಿಮಾನಿಗಳಲ್ಲಿ ಮತ್ತು ಕಾಂಗ್ರೇಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಸಂಶಯವನ್ನು ಉಂಟುಮಾಡುವಂತಹ ಮತ್ತು ಅವರಿಗೆ ಮಾನಹಾನಿ ಆಗುವಂತೆ ಸುದ್ದಿಯನ್ನು ಬಿತ್ತರಿಸಿದ್ದು, ಶಾಂತಿಯುತ ದಕ್ಷಿಣ ಕನ್ನಡದ ಜನರಲ್ಲಿ […]
ನಾಳೆ (ಡಿ.3) ವಿಟ್ಲ ಕುದ್ದುಪದವಿನಲ್ಲಿ ಬೃಹತ್ ಬುರ್ದಾ, ಖವಾಲಿ ಸಂಗಮ, ಪ್ರಚಾರ ಮಹಾಸಮ್ಮೇಳನ
ಪುತ್ತೂರು: ಜ.30 ರಿಂದ ಫೆ.2 ರ ತನಕ ಕೇರಳ ಕಣ್ಣೂರು ಚಪ್ಪಾರಪಡವು ನಲ್ಲಿ ನಡೆಯಲಿರುವ ಜಾಮಿಅಃ ಇರ್ಫಾನಿಯ್ಯ ಅರೆಬಿಕ್ ಕಾಲೇಜು ಇದರ 33ನೇ ವಾರ್ಷಿಕ ಹಾಗು 22ನೇ ಸನದುದಾನ ಮಹಾ ಸಮ್ಮೇಳನದ ಪ್ರಚಾರಾರ್ಥವಾಗಿ ವಿಟ್ಲ ಕುದ್ದುಪದವು ಕೆದಿಲ ಕಾಂಪ್ಲೆಕ್ಸ್ ನಲ್ಲಿ ಡಿ.3 ರಂದು ಉದ್ಘಾಟನಾ ಸಮ್ಮೇಳನ ಮತ್ತು ಬುರ್ದಾ, ಖವಾಲಿ ಸ್ಪರ್ಧೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಜಂಯಿತ್ತುಲ್ ಇರ್ಫಾನಿಯ್ಯಃ ಸಂಸ್ಥೆಯ ಅಧ್ಯಕ್ಷ ಶೇಖ್ ಮಹಮ್ಮದ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ಸಮ್ಮೇಳನದಲ್ಲಿ ಬಾಯಾರಿನ ಅಲ್ ಹಾಜ್ ಉಸ್ತಾದ್ […]
ಬಡಗನ್ನೂರು ನಿವಾಸಿ ನಯನ್ ಕುಮಾರ್ ಪೇರಾಲು ನಿಧನ
ಬಡಗನ್ನೂರು: ಬಡಗನ್ನೂರು ಗ್ರಾಮದ ನಿವಾಸಿ ನಯನ್ ಕುಮಾರ್ ಪೇರಾಲು (30.ವ) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯೊಂದರಲ್ಲಿ ಡಿ.1 ರಂದು ನಿಧನ ಹೊಂದಿದರು. ಮೃತರು ತಂದೆ ನಾರಾಯಣ ನಾಯ್ಕ ಪೇರಾಲು,ತಾಯಿ ಹೇಮಾವತಿ, ಸಹೋದರಿ ದೀಕ್ಷಿತ ಹಾಗೂ ಅಜ್ಜಿ ಗೋಪಿ , ಚಿಕ್ಕಪ್ಪ, ಚಿಕ್ಕಮ್ಮ ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.